Thursday, August 5, 2010

ಜ್ಞಾನ ಪೀಠ ಪುರಸ್ಕೃತ ಕನ್ನಡ ಸಾಹಿತಿಗಳು

ಕುವೆಂಪು:






ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳ್ಳಿ ವೆಂಕಟಪ್ಪನ ಮಗ ಪುಟ್ಟಪ್ಪನವರು ಮಲೆನಾಡ ಮಡಿಲಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯವರು. ೨೯ನೇ ಡಿಸೆಂಬರ ೧೯೦೪ ರಂದು ಜನಿಸಿದರು. ತಮ್ಮ ಫ್ರೌಡಶಾಲಾ ಮತ್ತು ಉನ್ನತ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಮೈಸೂರ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಿವೃತ್ತರಾದರು.೯ನೇ ನವೆಂಬರ ೧೯೯೪ ರಲ್ಲಿ ನಿಧನರಾದರು.


‘ಶ್ರೀ ರಾಮಾಯಣ ದರ್ಶನಂ’ ಈ ಯುಗದ ಮಹಾಕಾವ್ಯ. ಇದಕ್ಕೆ ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೮ ರಲ್ಲಿ ಭಾರತಿಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ.೧೯೫೭ ರಲ್ಲಿ ಧಾರವಾಡದಲ್ಲಿ ನಡೆದ ೨೯ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬೆಂಗಳೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್, ೧೯೯೨ರಲ್ಲಿ ಕರ್ನಾಟಕ ರತ್ನ ಮುಂತಾದ ಗೌರವಗಳು ಅವರಿಗೆ ಸಂದಿವೆ.


ಆಧುನಿಕ ಕನ್ನಡ ಸಾಹಿತ್ಯ ಹಿರಿಯ ಕವಿಗಳಲ್ಲಿ ಅಗ್ರಗಣ್ಯರಾದ ಕುವೆಂಪು ಅವರು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯು ಕೃತಿ ರಚಿಸಿದ್ದಾರೆ. ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ ಮುಂತಾದವು ಕವನ ಸಂಕಲನಗಳು. ‘ಸನ್ಯಾಸಿ ಮತ್ತು ಇತರ ಕಥೆಗಳು’ ಎಂಬ ಕಥಾ ಸಂಕಲನಗಳು, ಯಮನ ಸೋಲು, ಬೆರಳ್ಗೆ ಕೊರಳ್ ಮುಂತಾದ ನಾಟಕಗಳು. ‘ನೆನಪಿನ


ದೋಣಿಯಲ್ಲಿ’ ಎಂಬ ಆತ್ಮಕಥನ. ಅನುವಾದ ಮಹಾಕಾವ್ಯ ಮುಂತಾದ ಸುಮಾರು ೭೦ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ.

ಡಾ.ದ. ರಾ. ಬೇಂದ್ರೆ:






ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿದ್ದ ‘ದತ್ತಾತ್ರೇಯ ರಾಮಚಂದ್ರ ಬೇಂದ್ರೆ’ ಅವರು ಮನ್ಮಥನಾಮ ಸಂವತ್ಸರದ ಮಾಘವದ್ಯ ಪ್ರತಿಪದೆಯಂದು ೩೦-೦೧-೧೮೮೬ರಲ್ಲಿ ಧಾರವಾಡದ ಪೋತನಿಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು. ಅವರ ತಂದೆ ರಾಮಚಂದ್ರ ಪಂತರು, ತಾಯಿ ಅಂಬೂತಾಯಿ.


ಧಾರವಾಡದಲ್ಲಿ ಶಿಕ್ಷಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿ ಸೋಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾದರು. ನಿವೃತ್ತರಾದ ನಂತರ ಧಾರವಾಡದ ಆಕಾಶವಾಣಿಯಲ್ಲಿ ಕೆಲಸ ಮಾಡಿದರು.


ಬೇಂದ್ರೆಯವರು ಜ್ಞಾನಪೀಠ ಪ್ರಶಸ್ತಿಯನ್ನು ‘ನಾಕುತಂತಿ’ ಕವನ ಸಂಕಲನಕ್ಕೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ‘ಅರಳು ಮರಳು’ ಕವನ ಸಂಕಲನಕ್ಕೆ ಪಡೆದಿದ್ದಾರೆ. ಇದಲ್ಲದೆ ಶಿವಮೊಗ್ಗಾದಲ್ಲಿ ೧೯೪೩ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮೈಸೂರು ವಿಶ್ವವಿಧ್ಯಾನಿಲಯ ಹಾಗೂ ಕಾಶಿ ವಿದ್ಯಾಪೀಠಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ೨೬-೧೦೧೯೮೧ರಲ್ಲಿ ನಿಧನರಾದರು.


ಕನ್ನಡ ಕಾವ್ಯ ಪರಂಪರೆಯನ್ನು ಜೀವಂತವಾಗಿ ಮುಂದುವರೆಸುವದರಲ್ಲಿ ಅಂಬಿಕಾತನಯದತ್ತರ ಪಾತ್ರ ಹಿರಿದಾದುದು. ಅವರ ಮೊದಲನೆ ಕವನ ಸಂಕಲನವಾದ ‘ಗರಿ’ಯಲ್ಲಿ ಹೇಳಿದ ಮಾತುಗಳನ್ನು ಗಮನಿಸಿದರೆ ಕನ್ನಡದ ಅಶರೀರವಾಣಿಯು ಸಾವಿರ ಬಾಯಿಗಳಿಂದ ತನ್ನ ಕನಸನ್ನು ಕನ್ನಡಿಸುತ್ತದೆ. ಆ ಸಾವಿರ ಬಾಯಿಗಳಲ್ಲಿ ನನ್ನದೊಂದು. ಅದೇ ನನ್ನ ಧನ್ಯತೆ ಎಂದು ಸಹೃದಯರಿಗೆ ನಿವೇದಿಸಿಕೊಳ್ಳುವ ಮಾತು ಬೇಂದ್ರೆ ಅವರ ಪ್ರತಿಭೆಯ ದ್ಯೋತಕವಾಗಿದೆ.

ಶಿವರಾಮ ಕಾರಂತ :






“ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಬರೆಯದ ವಿಷಯವಿಲ್ಲ”, ‘ಕಾರಂತರು ಒಬ್ಬ ವ್ಯಕ್ತಿಯಲ್ಲ ಅವರೊಂದು ಸಂಸ್ಥೆ; ‘ಶಿವರಾಮ ಕಾರಂತರು ನಡೆದಾಡುವ ವಿಶ್ವಕೋಶ’ ಮುಂತಾದ ಮಾತುಗಳು ಕಾರಂತರನ್ನು ಕುರಿತು ಬರವಣಿಗೆಯಲ್ಲಿ ಈಗಾಗಲೇ ಕ್ಲೀಶೆಗಳಾಗಿ ಹೋಗಿವೆ. ಕಾರಂತರ ವೈಶಿಷ್ಟ್ಯವೆಂದರೆ ತಮ್ಮ ಬಗ್ಗೆ ಆಗಿಂದಾಗೆ ಬರುವ ಹೊಗಳಿಕೆ ತೆಗಳಿಕೆಗಳಿಗೆ ಮನಸ್ಸು ಕೊಡದೆ ತಮ್ಮ ಕೆಲಸವನ್ನು ಶ್ರದ್ಧೆಯಿಂದ, ಏಕಾಗ್ರತೆಯಿಂದ ಮಾಡಿಕೊಂಡು ಹೋಗುವದು.


ಕನ್ನಡದ ಪ್ರಸಿದ್ದ ಕಾದಂಬರಿಕಾರರಾದ ಡಾ. ಶಿವರಾಮ ಕಾರಂತರ ದಿನಾಂಕ ೧೦-೧೦-೧೯೦೨ರಂದು ದಕ್ಷಿಣ ಕನ್ನಡ ಜಿಲ್ಲೆಯ ‘ಕೋಟ’ದಲ್ಲಿ ಜನಿಸಿದರು. ಸಾಹಿತ್ಯ, ಕಲೆ, ವಿಜ್ಞಾನ ಮತ್ತು ಯಕ್ಷಗಾನ ಹೀಗೆ ಹಲವಾರು ಪ್ರಕಾರಗಳಲ್ಲಿ ಅವರು ಕೃತಿ ರಚನೆ ಮಾಡಿದ್ದಾರೆ.ಮರಳಿ ಮಣ್ಣಿಗೆ, ಅಳಿದ ಮೇಲೆ, ಜೋಮನ ದುಡಿ, ಮೂಕಜ್ಜಿಯ ಕನಸುಗಳು ಅವರ ಜನಪ್ರಿಯ ಕಾದಂಬರಿಗಳು. ಕಿಸಾಗೋತಮಿ, ಮುಕ್ತದ್ವಾರ, ಬುದ್ಧೋದಯ ಅವರ ಗೀತನಾಟಕಗಳು. ಯಕ್ಷಗಾನ, ಬಯಲಾಟ, ಕರ್ನಾಟಕದಲ್ಲಿ ಚಿತ್ರಕಲೆ ಮತ್ತು ಭಾರತೀಯ ಶಿಲ್ಪಯುತರು ಕಲಾ ಜಗತ್ತಿಗೆ ನೀಡಿದ ಅಪೂರ್ವ ಗ್ರಂಥಗಳು.


‘ಅಬೂವಿನಿಂದ ಬರಾಮಕ್ಕೆ’, ‘ಪಾತಳಕ್ಕೆ ಪ್ರಯಾಣ’, ‘ಪಶ್ಚಿಮ ಘಟ್ಟಗಳು’, ಇವರ ಪ್ರವಾಸಕಥಾನಗಳಾಗಿದ್ದು, “ಹುಚ್ಚು ಮನಸ್ಸಿನ ಹತ್ತು ಮುಖಗಳು” ಮತ್ತು ಸ್ಮೃತಿ ಪಟಲದಿಂದ ಆತ್ಮ ಕಥನಗಳಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಸ್ಪೀಡಿಶ್ ಅಕಾಡೆಮಿ, ಪಾರಿತೋಷಕ, ಭಾರತೀಯ ಜ್ಞಾನಪೀಠ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದುಕೊಂಡ ಕಾರಂತರು ‘ಚಲಿಸುವ ವಿಶ್ವಕೋಶ’, ‘ಕಡಲ ತೀರದ ಭಾರ್ಗವ’ರೆಂದೂ ಹೆಸರುವಾಸಿಯಾಗಿದ್ದಾರೆ.


ಮಾಸ್ತಿ ವೆಂಕಟೇಶ ಅಯ್ಯಂಗಾರ :




ಕನ್ನಡ ಸಾಹಿತ್ಯ ಪರಂಪರೆಯ ನಿರ್ಮಾಪಕರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಒಬ್ಬರು. ಅವರು ೬-೦೬-೧೮೯೧ರಲ್ಲಿ ಕೋಲಾರ ಜಿಲ್ಲೆಯ ‘ಮಾಸ್ತಿ’ ಗ್ರಾಮದಲ್ಲಿ ಹುಟ್ಟಿದರು.


ಮಾಸ್ತಿಯವರ ಕಥಾಸಾಹಿತ್ಯದಲ್ಲಿ ‘ಚೆನ್ನಬಸವನಾಯಕ’ ಮತ್ತು ‘ಚಿಕವೀರ ರಾಜೇಂದ್ರ’ ಕಾದಂಬರಿಗಳು ಶಿಖರ ಪ್ರಾಯಗಳಾಗಿವೆ. ಇವು ಕ್ರಮವಾಗಿ ೧೯೪೯ ಮತ್ತು ೧೯೫೬ರಲ್ಲಿ ಪ್ರಕಟವಾಗಿವೆ. ಇವೆರಡೂ ಐತಿಹಾಸಿಕ ಕಾದಂಬರಿಗಳು. ಮಾಸ್ತಿ ವೆಂಕಟೇಶ ಅಯ್ಯಂಗಾರ ಸಾಕಷ್ಟು ಕಾವ್ಯಗಳನ್ನು ಬರೆದಿದ್ದಾರೆ. ಅವರ ಕಾವ್ಯಗಳಲ್ಲಿ ‘ಶ್ರೀನಿವಾಸ ದರ್ಶನ’, ‘ಪ್ರಕೃತಿ ಸೌಂದರ್ಯ’, ‘ಕನ್ನಡ ಪ್ರೇಮ’, ನಾಡುನುಡಿ ವ್ಯಕ್ತಿಗಳಿಗೆ ಸಂಬಂಧಿಸಿದ ರಚನೆಗಳು ಭಾವಗೀತೆಗಳಲ್ಲಿ ಎದ್ದು ಕಾಣು
ತ್ತವೆ. ಇವರ ಕಾವ್ಯ ಸರಳವಾದುದು, ಸುಂದರವಾದುದು.


ಮಾಸ್ತಿಯವರ ಸಾಹಿತ್ಯದಂತೆ ಅವರ ಬದುಕು ದೊಡ್ಡದು. ಅವರ ಬದುಕು ಒಂದು ಮಹಾಕೃತಿ. ಅವರ ಬದುಕಿಗೂ, ಬರಹಕ್ಕೂ ಅಂತರ ಕಡಿಮೆ. ಬದುಕಿದಂತೆ ಬರೆಯಬೇಕು ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ. ಕನ್ನಡಕ್ಕೆ ಅಖಿಲ ಭಾರತ ಖ್ಯಾತಿ ದೊರಕಿಸಿಕೊಟ್ಟ ಕೀರ್ತಿ ಅವರದು.


ಡಾ.ವಿನಾಯಕ ಕೃಷ್ಣ ಗೋಕಾಕ:


ಕವಿ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಶಿಕ್ಷಣ ತಜ್ಞ ವಿನಾಯಕ ಕೃಷ್ಣ ಗೋಕಾಕರು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಕೃಷ್ಣರಾಯರು ಇವರ ತಂದೆ. ಶಾರದದೇವಿ ಇವರ ಪತ್ನಿ. ಸವಣೂರು ಧಾರವಾಡದಲ್ಲಿ ವಿದ್ಯಾಭ್ಯಾಸ ೧೯೯೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ ಹಾಗೂ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದರು.
ಗೋಕಾಕರು ನವ್ಯಕಾವ್ಯದ ಅಧ್ವರ್ಯಗಳಲ್ಲೊಬ್ಬರು. ಪರಂಪರೆಯಲ್ಲಿ ಉತ್ತಮವಾದದನ್ನು ಉಳಿಸಿಕೊಂಡು ನವ್ಯತೆಯನ್ನು ಪ್ರತಿಪಾದಿಸಿ ನವ್ಯತೆಯನ್ನು ಸಾಧಿಸಿದರು. ಇವರ “ತ್ರಿವಿಕ್ರಮರ ಆಕಾಶಗಂಗೆ” ಬಾಲ್ಯ ಯೌವನ ದೈವಭಕ್ತಿ ಸೌಂದರ್ಯಗಳಿಂದ ವಿವರಿಸುವ ಕಾವ್ಯ ಇಂದಲ್ಲ ನಾಳೆ ಕೃತಿ ಹೊರದೇಶಗಳ ಸಂಚಾರದಿಂದ ಅಲ್ಲಿನ ಸಂಸ್ಕ್ರತಿಯನ್ನು ಬಣ್ಣಿಸುತ್ತದೆ. ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು ಸಾಹಿತ್ಯದಲ್ಲಿ ಪ್ರಗತಿ ನವ್ಯತೆ ಹಾಗು ಕಾವ್ಯ ಜೀವನ


ವಿಮರ್ಶಾಸಂಕಲನಗಳು ಗೋಕಾಕರು ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲೀಷಿ
ನಲ್ಲೂ ಸಾಹಿತ್ಯ ರಚನೆ ಮಾಡಿದ್ದಾರೆ. ದಿ ಸಾಂಗ್ ಆಫ್ (ಹೈ)ಲೈಫ್,ಇನ್ ಲೈಫ್ ಚೆಂಪಲ್ ಇವರ ಇಗ್ಲೀಷ್ ಕವನಗಳು. ಇದಲ್ಲದೆ ಭಾರತ ಸಂಸ್ಕ್ರತಿ, ಸೌಂದರ್ಯ ಮಿಮಾಂಸೆ ಕನ್ನಡಸಾಹಿತ್ಯಚರಿತ್ರೆಗಳನ್ನು ಕುರಿತು ಸರ್ವಜ್ಞ ಬೇಂದ್ರೆ ಮುಂತಾದ ಕನ್ನಡ ಕವಿಗಳ ಬಗೆಗೂ ಇಗ್ಲೀಷ್‌ನಲ್ಲಿ ಬರೆದಿದ್ದಾರೆ.


ಗೋಕಾಕರ ಮಹಾಸೇವೆಗೆ ಕನ್ನಡನಾಡು ವಿವಿಧ ಬಗೆಯಲ್ಲಿ ಗೌರವಿಸಿದೆ. ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
ರಾಗಿದ್ದರು. ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಅವರನ್ನು ಗೌರವಿಸಿದೆ.’೧೯೬೧’ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದೆ. “ಯೂನಿವರ್ಸಿಟಿಆಫ್ಪೆಸಿಪಿಕ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿವೆ. ‘ವಿನಾಯಕ ವಾಙ್ಮಯ ಅಭಿನಂದನ ಗ್ರಂಥವನ್ನು ಗೌರವ ಪೂರ್ವಕವಾಗಿ ಅರ್ಪಿಸಲಾಗಿದೆ. ಅವರ ಮಹಾಕಾವ್ಯ ಭಾರತ ಸಿಂಧು ರಶ್ಮಿಗೆ ೧೯೯೦ರ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ವಿನಾಯಕ ಕೃಷ್ಣ ಗೋಕಾಕ ಅವರು ಮುಂಬೈಯಲ್ಲಿ ೨೮-೪-೧೯೯೨ರಂದು ನಿಧನರಾದರು.






ಯು.ಆರ್. ಅನಂತಮೂರ್ತಿ :




ಪ್ರಸಿದ್ಧ ಕಾದಂಬರಿಕಾರ, ಕಥೆಗಾರ, ವಿಮರ್ಶಕರಾದ ಯು. ಆರ್. ಅನಂತಮೂರ್ತಿ ತೀರ್ಥಹಳ್ಳಿ ತಾಲೂಕು ಮೇಳಗೆ ಹಳ್ಳಿಯಲ್ಲಿ ೨೧-೧೨-೧೯೩೨ ರಂದು ಜನಿಸಿದರು. ರಾಜಗೋಪಾಲಚಾರ್ಯ ಇವರ ತಂದೆ. ಸತ್ಯಭಾಯಿ ತಾಯಿ. ಕೋಣಂದೂರು, ಮೇಳಗೆ, ತೀರ್ಥಹಳ್ಳಿಯಲ್ಲಿ ಪ್ರಾರಂಭದ ವಿಧ್ಯಾಭಾಸ, ಮೈಸೂರಿನಲ್ಲಿ ಬಿ.ಎ.ಆನರ್ಸ ಹಾಗೂ ಇಂಗ್ಲೀಷ ಎಂ. ಎ. ಅನಂತರ ಬರ್ಮಿಂಗ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಕೇರಳದ ಕೊಟ್ಟಾಯಂನ ಮಹಾತ್ಮಗಾಂಧಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ, ದೆಹಲಿಯ ಜವರಲಾಲ ನೆಹರೂ ವಿಶ್ವವಿದ್ಯಾಲಯ ಮೂದಲಾದ ಕಡೆಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿದ್ದರು. ಅನಂತಮೂರ್ತಿಯವರು ನ್ಯಾಷನಲ್ ಬುಕ್ ಟ್ರಸ್ಟ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.


೧೯೬೩ರಲ್ಲಿ ಅನಂತಮೂರ್ತಿ ‘ಭಾವಲಿ’ ಕವನ ಸಂಕಲನವನ್ನು ಪ್ರಕಟಿಸಿದರು. ಅನಂತರ ‘೧೫ ಪದ್ಯಗಳು’, ‘ಅಜ್ಜನ ಹೆಗಲಸುತ್ತುಗಳು’,’ಮಿಥುನ’, ಸಂಕಲನಗಳು ಪ್ರಕಟಗೊಂಡವು. ಅನಂತಮೂರ್ತಿಯವರು ಬರೆದಿರುವ ಏಕೈಕ ನಾಟಕ ‘ಆಹಾವನೆ’ ಇದುವರೆಗೆ ಅವರ ಏಳು ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿ ತಮ್ಮ ವಿಮರ್ಶಾ ಹಾಗೂ ವೈಚಾರಿಕ ಬರಹಗಳ ಮೂಲಕ ಕನ್ನಡ ಭಾಷೆಯನ್ನು ಸಮರ್ಥವಾಗಿ ಹದಗೊಳಿಸಿದ್ದಾರೆ. ನಾನು ಹಿಂದು ಬ್ರಾಹ್ಮಣ, ಮೀಸಲಾತಿ ಮುಂತಾದ ವಿಷಯಗಳ ಕುರಿತು ಇವರ ಅಭಿಪ್ರಾಯಗಳಾಗಿ ಪ್ರಾಥಮಿಕ ಶಿಕ್ಷಣ, ಕನ್ನಡ ಭಾಷೆಯ ಅಗತ್ಯ ಕುರಿತು ಇವರ ಭಾಷಣಗಳು ಇಂದಿಗೂ ಅಲ್ಲಲ್ಲಿ ಚರ್ಚಾ ವಿಷಯಗಳಾಗಿವೆ. ಇವರ ಕೆಲವು ಮಹತ್ವದ ಕೃತಿಗಳೆಂದರೆ ‘ಪೂರ್ವಾಪರ’, ‘ಆಕಾಶ ಮತ್ತು ಬೆಕ್ಕು’, ‘ಕ್ಲಿಪ್ ಜಾಯಿಂಟ್’, ‘ಎರಡು ದಶಕದ ಕತೆಗಳು’,‘ ದಿವ್ಯ’,‘ ಸಮಕ್ಷಮ’, ‘ಸನ್ನಿವೇಶ’, ‘ಪ್ರಜ್ಞೆ ಮತ್ತು ಪರಿಸರ’, ‘ಘಟ ಶ್ರಾದ್ಧ’, ಒಂದು ಕಾಲದ ಅಗ್ರಗಣ್ಯ ಲೇಖಕರ ಸಾಲಿನಲ್ಲಿ ನಿಲ್ಲುವ ಬಹುಮುಖಿ ವ್ಯಕ್ತಿತ್ವದ ಯು.ಆರ್.ಅನಂತಮೂರ್ತಿ ಕನ್ನಡ ಸಾಹಿತ್ಯದ ಮುಖ್ಯ ಲೇಖಕರು.


ಡಾ.ಗೀರಿಶ ಕಾರ್ನಾಡ್ :




ಗಿರೀಶ ಕಾರ್ನಾಡ್ ಮಹಾರಾಷ್ಟ್ರದಲ್ಲಿ ೧೯ ಮೇ ೧೯೩೮ರಲ್ಲಿ ಜನಿಸಿದರು. ತಂದೆ ಡಾ .ರಘುನಾಥ ಕಾರ್ನಾಡ್. ತಾಯಿ ಕೃಷ್ಣಾಬಾಯಿ. ಕಾರ್ನಾಡರು ಧಾರವಾಡ ಮತ್ತು ಮುಂಬೈಗಳಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಆಕ್ಸಫರ್ಡ್ ವಿಶ್ವವಿದ್ಯಾ


ಲಯದಿಂದ ಎಂ ಎ ಪದವಿ ಪಡೆದರು. ಕಾರ್ನಾಡರ ಮೊದಲ ಕೃತಿ ಯಯಾತಿ ನಾಟಕ- ೧೯೬೧ ಇದುವರೆಗೆ ಕಾರ್ನಾಡರು ೯ ನಾಟಕಗಳನ್ನು ಬರೆದಿದ್ದಾರೆ.ಕಾರ್ನಾಡರು ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿರುವರು. ಕನ್ನಡದ ಪ್ರಸಿದ್ಧನಾಟಕಕಾರ. ನಟ, ನಿರ್ದೇಶಕ, ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟ್ ಕೇಂದ್ರ ನಾಟಕ ಶಾಲೆಗಳ ನಿರ್ದೇಶಕರಾಗಿದ್ದರು. ೧೯೯೮ರ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಕಾರ್ನಾಡರು ಮೊದಲಿಗರು.


ಚಲನ ಚಿತ್ರ ಕ್ಷೇತ್ರಕ್ಕೆ ಕಾರ್ನಾಡರ ಕೊಡುಗೆ ಅಪಾರವಾದದ್ದು. ೬೦ ರ ದಶಕದಲ್ಲಿ ಅವರು ಅಭಿನಯಿಸಿದ ಸಂಸ್ಕಾರ ರಾಷ್ಟ್ರಪ್ರಶಸ್ತಿಯನ್ನು ಗಳಿಸಿದ್ದಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿತು. ಕನ್ನಡ ಚಿತ್ರರಂಗದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ರಂಗದಲ್ಲಿ ಮನ್ನಣೆ ಗಳಿಸಿತು. ಬಿ.ವಿ.ಕಾರಂತರೊಡಗೂಡಿ ಅವರು ನಿರ್ದೇಶಿಸಿದ ಚಿತ್ರಗಳು- ವಂಶ ವೃಕ್ಷ, ತಬ್ಬಲಿ ನಿನಾದೆ ಮಗನೆ. ಕಾರ್ನಾಡರು ನಿರ್ದೇಶಿಸಿದ ಒಂದಾನೊಂದು ಕಾಲದಲ್ಲಿ, ಕಾಡು. ಹಿಂದಿಯಲ್ಲಿ ಉತ್ಸವ್, ಚೆಲ್ವಿ, ಇತ್ತಿಚೆಗೆ ಕಾನೂರು ಹೆಗ್ಗಡತಿ, ಚಿತ್ರರಂಗದಲ್ಲಿ ಅಪಾರ ಯಶಸ್ಸು, ಹುಮ್ಮಸ್ಸನ್ನು ತಂದು ಕೊಟ್ಟಿವೆ. ಕಾರ್ನಾಡರ ಸಾಧನೆಗಳನ್ನು ಗಮನಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಗಿರೀಶ ಕಾರ್ನಾಡ್‌ರು ಸಿನಿಮಾ ಮತ್ತು ದೂರದರ್ಶನಗಳಲ್ಲಿ ಸ್ಟಾರ್ ವ್ಯಾಲ್ಯೂ ಇರುವ ಬುದ್ದಿಜೀವಿ. ಭಾರತೀಯ ಪ್ರಾತಿನಿಧಿಕ ಪ್ರತಿಭಾವಂತರಾಗಿ ವಿದೇಶಗಳಲ್ಲಿ ನಾಟಕ, ಭಾಷಣ, ಸಿನಿಮಾಗಳ ಮೂಲಕ ಸದಾ ಕ್ರೀಯಾಶೀಲವಾಗಿರುವ ವ್ಯಕ್ತಿತ್ವ ಕಾರ್ನಾಡರದು.




ಶಕುಂತಲಾ ಹಿರೇಮಠ ಬಿ.ಎ. ೧

3 comments: