Sunday, April 18, 2010

ನಮ್ಮೂರು - ಬೊಮ್ಮನಹಳ್ಳಿ








                                           (ನಮ್ಮೂರ ಐತಿಹಾಸಿಕತೆಯನ್ನು ಸಾರುವ ಹುಡೆ.)


ನಮ್ಮೂರು : ಕೇಳಿದ್ದು ,ಕಂಡದ್ದು !

ನಮ್ಮೂರು ಬೊಮ್ಮನಹಳ್ಳಿ ! ಹಾಂ! ತಡೆಯಿರಿ ಇದು ಕಿಂದರಜೋಗಿಯ ಬೊಮ್ಮನಹಳ್ಳಿಯಲ್ಲ !ಇದು ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾನೂರುಮನೆಗಳ ಚಿಕ್ಕಹಳ್ಳಿ.ಪುರಾತನವಾದ ಈ ಊರಿನಲ್ಲಿ ಅನೇಕ ಹುಡೆಗಳಿವೆ; ಹಾಳುಬಿದ್ದ ದೇವಾಲಯಗಳಿವೆ; ದೇವತಾ ವಿಗ್ರಹಗಳಿವೆ; ಮಾಸ್ತಿಕಲ್ಲು ಇವೆ; ನಿಗೂಢ ಭಾವಿಗಳಿವೆ. ಇತಿಹಾಸ ಆಸಕ್ತರನ್ನು ಕೈಮಾಡಿ ಕರೆಯುತ್ತವೆ.



ವ್ಯಾಸನ ತೋಳು ಎಂದು ಕರೆಯಲ್ಪಡುವ ಮಾಸ್ತಿ ಕಲ್ಲು !






ಅತಿ ಪುರಾತನವಾದ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯವೆಂದರೆ ಸಂಗಮ
ನಾಥನದು. ಈಶ್ವರ ಲಿಂಗ ಮತ್ತು ಬಸವಣ್ಣನ ಮೂರ್ತಿಗಳಿವೆ. ಕುಸುರಿಕೆತ್ತನೆ
ಯಿಲ್ಲದಿದ್ದರೂ ಗಮನಸೆಳೆಯುವ ಸ್ಥಂಬಗಳಿವೆ. ಈಗ ಆರ್ಧಕ್ಕಿಂತಲೂ ಹೆಚ್ಚು ನಾಶ
ವಾಗಿ ಕಣ್ಣಕಪ್ಪಡಿಗಳ ಆವಾಸಸ್ಥಾನವಾಗಿರುವ ಈ ದೇವಾಲಯದ ಗರ್ಭಗುಡಿಯ ಮುಂದೆ ಅನೇಕ ಶಿಥಿಲ ಶಿಲ್ಪಗಳಿವೆ. ಅವುಗಳಲ್ಲಿ ಭೈರವನ ವಿಗ್ರಹ ಅತ್ಯಂತ ಸುಂದರವಾಗಿದೆ. ವ್ಯಾಸನತೋಳು ಎಂದು ನಮ್ಮೂರ ಜನರಿಂದ ಕರೆಯಲ್ಪಡುವ ಮಾಸ್ತಿಕಲ್ಲು ಇದೆ. ಈ ದೇವಾಲಯದ ಅತ್ಯಂತ ರೋಚಕ ಸಂಗತಿ ಎಂದರೆ ಗರ್ಭ
ಗುಡಿಯಲ್ಲಿಯೇ ಇರುವ ಭೂಗತ ಭಾವಿ ! ಇಲ್ಲಿ ಬಟ್ಟಲನ್ನು ತೇಲಿಬಿಟ್ಟರೆ ಅದು ೫ ನೂರು ಮೀ. ದೂರದಲ್ಲಿರುವ ಸಿದ್ಧೇಶ್ವರ ಗುಡಿಯ ಮುಂದಿನ ಸಿಡಿಲ ಭಾವಿಯಲ್ಲಿ ಕಾಣುತ್ತದಂತೆ ! ಇಲ್ಲಿರುವ ಇನ್ನೊಂದು ಸುಂದರ ಮೂರ್ತಿ ಒಡೆದು ಎರಡುಭಾಗ
ವಾಗಿದೆ.ಎರಡು ಮೂರು ನಾಗರಕಲ್ಲುಗಳಿವೆ.

ಬಾಣತಿ ಕಲ್ಲು ಎಂದು ಪೂಜಿಸಲ್ಪಡುವ ಗಜಲಕ್ಶ್ಮೀ ಶಿಲ್ಪ


೪೦ ಫೂಟು ಎತ್ತರವಿರುವ ಎರಡು ಹುಡೆಗಳಿವೆ. ಸಂಗಮನಾಥ ಗುಡಿಯ ಹತ್ತಿರ
ವಿರುವ ಹುಡೆದ ಮಧ್ಯದಲ್ಲಿಯೆ ಚಿಕ್ಕಲಕ್ಷ್ಮೀ ಗುಡಿಯಿದೆ. ಇಲ್ಲಿಂದ ೨ ನೂರು ಫೂಟು ದೂರದಲ್ಲಿ ಪಾಲಕಮ್ಮ ನ ಚಿಕ್ಕ ದೇವಸ್ಥಾನವಿದೆ. ಅದರ ಮುಂದೆ ಇರುವ ಗಜಲಕ್ಷ್ಮೀ ಶಿಲ್ಪಕ್ಕೆ ಬಾಣಂತಿ ಕಲ್ಲೆಂದು ಕರೆಯುತ್ತಾರೆ.ಈಗಲೂ ಹೆರಿಗೆತಡ
ವಾದರೆ ಈ ಕಲ್ಲನ್ನು ಬೋರಲು ಹಾಕುತ್ತಾರೆ. ಸುರಕ್ಷಿತ ಹೆರಿಗೆಯಾದ ಅನಂತರ ಮತ್ತೆ ಸಮಸ್ಥಿತಿಯಲ್ಲಿ ನಿಲ್ಲಿಸಿ ಪೂಜೆ ಸಲ್ಲಿಸುತ್ತಾರೆ



ಸಂಗಮನಾಥನ ದೇವಾಲಯ- ಒಳಭಾಗದಲ್ಲಿರುವ ಸ್ಥಂಭಗಳು

ಊರ ಹೊರಗೆ ಹಳ್ಳದ ಹತ್ತಿರ ಶಾಂತಲಿಂಗೇಶ್ವರ ಮಠ ಇದೆ. ಐವತ್ತು ವರ್ಷಗಳ ಹಿಂದೆ ಇಲ್ಲೊಬ್ಬ ಶರಣರು ಆಗಿಹೋಗಿದ್ದಾರೆ. ಬಸ್ ನಿಲುಗಡೆ ಹತ್ತಿರವೇ ಅಮಲೇ
ಶ್ವರ ಮಠವೂ ಇದೆ. ಗ್ರಾಮದೇವತೆಯ ಗುಡಿ ಒಕ್ಕಲಿಗರ ಭಕ್ತಿಗೆ ಸಾಕಾರ
ವಾಗಿದೆ. ಊರಿದ್ದಲ್ಲಿ ಹನುಮಪ್ಪ ಇರಲೇಬೇಕಲ್ಲ ! ಹನುಮಪ್ಪನ ದೇವಸ್ಥಾನ ನಮ್ಮ ತಾಳಿಕೋಟಿ ಶ್ರೀ ಖಾಸ್ಗತೇಶ ಕಲಾ-ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ಶಿಬಿರದ ಸಂದರ್ಭದಲ್ಲಿ ಪುನ
ರುಜ್ಜೀವನಗೊಂಡಿದೆ. ಬಸ್ ನಿಲುಗಡೆ ಶೆಲ್ಟರ್ ಸಹ ಶಿಬಿರದ ವಿದ್ಯಾರ್ಥಿಗಳ ಶ್ರಮದಾನದಿಂದಲೇ ನಿರ್ಮಾಣವಾಗಿದೆ. 


ಇನ್ನು ನಮ್ಮೂರಿನ ಜನಪದದ ಬಗ್ಗೆ ಹೇಳಲೇಬೇಕು. ಎಲ್ಲಮ್ಮನ ಬಯಲಾಟ ಮೇಳ ನಮ್ಮೂರಲ್ಲಿತ್ತು. ಈಗ ಇಲ್ಲ. ಭಜನಾ ಮೇಳವಿದೆ.ಜನಪದ ಹಾಡುಗಾರ್ತಿ
ಯರೂ ನಮ್ಮೂರಲ್ಲಿದ್ದಾರೆ.


ಇದಿಷ್ಟು ನಮ್ಮೂರಿನ ಸಾಂಸ್ಕೃತಿಕ ಲೋಕದ ಸಂಕ್ಷಿಪ್ತ ಪರಿಚಯ.


  

ಶಿವರಾಜ ಗುಂಡಲಗೇರಿ ಬಿ.ಎ.  ೨

1 comment:

  1. 👌👌 ತುಂಬಾ ಉತ್ತಮವಾದ ಮಾಹಿತಿ ಸರ್

    ReplyDelete